ನೆಲ್ಸನ್, ಲಾರ್ಡ್
	1758-1805. ಬ್ರಿಟಿಷ್ ನೌಕಾವೀರ. ಫ್ರೆಂಚ್ ಕ್ರಾಂತಿಯ ಸಮಯದ ಕದನಗಳಲ್ಲಿ ಕೀರ್ತಿ ಗಳಿಸಿದ. 1758ರ ಸೆಪ್ಟೆಂಬರ್ 29ರಂದು ನಾರ್‍ಫೋಕ್‍ನಲ್ಲಿ ಜನಿಸಿದ, 1780ರಲ್ಲಿ ವೆಸ್ಟ್ ಇಂಡೀಸ್‍ನಲ್ಲಿ ಇವನು ಮೊಟ್ಟ ಮೊದಲು ಕದನದಲ್ಲಿ ಭಾಗವಹಿಸಿದ. 1784ರಲ್ಲಿ ಬೋರಿಯಾಸ್ ಯುದ್ಧನೌಕೆಯ ಅಧಿಪತಿಯಾಗಿದ್ದ, ಫ್ರಾನ್ಸಿಸ್ ನಿಸ್ಬೆಟ್ ಎಂಬ ವಿಧವೆಯನ್ನು 1785ರಲ್ಲಿ ಮದುವೆಯಾದ. ಬ್ಯಾಸ್ಟಿಯ ಮತ್ತು ಕ್ಯಾಲ್ವಿಯನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ಹುಡ್ಡನ ನಾಯಕತ್ವದಲ್ಲಿ ಹೋರಾಡಿದ. ಕ್ಯಾಲ್ವಿಯ ಕಾರ್ಯಾಚರಣೆಯಲ್ಲಿ ಇವನ ಬಲಗಣ್ಣು ಹೋಯಿತು. 1794ರಲ್ಲಿ ಕಾರ್ಸಿಕಾ ವಶವಾಯಿತು. ಇವನು 1797ರಲ್ಲಿ ರಿಯರ್ ಅಡ್ಮಿರಲ್ ಆದ. ಫ್ರಾನ್ಸಿನ ನೆಪೋಲಿಯನ್ ಬೋನಪಾರ್ಟ್ 1798ರಲ್ಲಿ ಈಜಿಪ್ಟಿಗೆ ನುಗ್ಗಿ ಅದನ್ನು ವಶಪಡಿಸಿಕೊಂಡು ಅಲ್ಲಿಂದ ಮುಂದೆ ಭಾರತದ ಮೇಲೆ ನುಗ್ಗಲು ಹವಣಿಸಿದ್ದ. ಆದರೆ ನೈಲ್ ನದಿ ಕದನದಲ್ಲಿ ನೌಕಾಧಿಪತಿಯಾಗಿದ್ದ ನೆಲ್ಸನ್ ಫ್ರೆಂಚ್‍ರ ಮೇಲೆ ಬಿದ್ದು ಅವರ ಹಡಗುಗಳನ್ನು ನಾಶ ಮಾಡಿದ. ಶತ್ರುದೇಶವಾದ ಫ್ರಾನ್ಸಿನೊಂದಿಗೆ ಯುದ್ಧಾವಶ್ಯಕ ಸಾಮಗ್ರಿಗಳ ವ್ಯಾಪಾರ ಮಾಡಲು ಇತರ ದೇಶಗಳಿಗೆ ಬ್ರಿಟನ್ನು ಅಡ್ಡಿ ತಂದೊಡ್ಡಿದ್ದರಿಂದ ಡೆನ್ಮಾರ್ಕ್, ಸ್ವೀಡನ್, ಪ್ರಷ್ಯ ಮತ್ತು ರಷ್ಯ ದೇಶಗಳು ಸಶಸ್ತ್ರ ತಾಟಸ್ಥ್ಯ ಎಂಬ ಸಂಘವೊಂದನ್ನು ಮಾಡಿಕೊಂಡು ಇಂಗ್ಲೆಂಡನ್ನು ಪ್ರತಿಭಟಿಸಿದುವು. ಈ ರಾಷ್ಟ್ರಗಳನ್ನು ಬ್ರಿಟಿಷ್ ನೌಕಾಪಡೆಯೊಂದು ನೆಲ್ಸನ್ ಮತ್ತು ಸರ್ ಹೈಡ್ ಪಾರ್ಕರ ಮುಖಂಡತ್ವದಲ್ಲಿ ಹೆಕೋಪನ್‍ಹೇಗನ್ ಕದನದಲ್ಲಿ 1801ರಲ್ಲಿ ಸೋಲಿಸಿತು. 1802ರಲ್ಲಿ ಒಪ್ಪಂದವಾಯಿತಾದರೂ ಯುದ್ಧ ನಿಲ್ಲಲಿಲ್ಲ. ನೆಪೋಲಿಯನ್ನನ ಚಟುವಟಿಕೆಗಳು ಇಂಗ್ಲೆಂಡನ್ನು ಕೆರಳಿಸಿದುವು. 1803ರಲ್ಲಿ ಪುನಃ ಯುದ್ಧ ಪ್ರಾರಂಭವಾಯಿತು. ಈ ಮಧ್ಯೆ ನೆಪೋಲಿಯನ್ ಇಂಗ್ಲೆಂಡನ್ನು ಮುತ್ತಲು ಪ್ರಯತ್ನಗಳನ್ನು ಮುಂದುವರಿಸಿದ್ದ, ಪೂರ್ವ ಮೆಡಿಟರೇನಿಯನ್ನಿನಲ್ಲಿ ನೆಲ್ಸನ್ನನ ನೇತೃತ್ವದಲ್ಲಿ ಬ್ರಿಟಿಷ್ ನೌಕಾಪಡೆ ಫ್ರಾನ್ಸಿನ ಮೇಲೆ ದಿಗ್ಬಂಧನ ವಿಧಿಸಿತು. ಫ್ರೆಂಚ್ ನೌಕಾಪಡೆಗೆ ಸ್ಪೇನ್ ತನ್ನ ನೌಕಾ ಪಡೆಯನ್ನೂ ನಾಶಗೊಳಿಸಿ ನಿರ್ಣಾಯಕ ವಿಜಯ ಸಾಧಿಸಿದ. ಆದರೆ ಫ್ರೆಂಚ್ ಹಡಗಾದ ರಿಡೌಟಬಲ್‍ನಿಂದ ಹಾರಿಸಲಾದ ತುಪಾಕಿಯ ಗುಂಡೊಂದು ತಾಕಿ ನೆಲ್ಸನ್ ಮರಣಹೊಂದಿದ. ಅವನನ್ನು ಸೇಂಟ್ ಪಾಲ್ಸ್ ಕತೀಡ್ರಲಿನಲ್ಲಿ 1806ರಲ್ಲಿ ಸಮಾಧಿ ಮಾಡಲಾಯಿತು.
(ಎಸ್.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ